ಬಿಗಬಾಸ ಕಲ್ಪನೆಯ ಮೂಲ ಕೆದಕಿದಾಗ- ಧರ್ಮವೇ ಮೂಲ ಅನಿಸುವುದಿಲ್ಲವೆ? - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಬುಧವಾರ, ಮೇ 19, 2021

ಬಿಗಬಾಸ ಕಲ್ಪನೆಯ ಮೂಲ ಕೆದಕಿದಾಗ- ಧರ್ಮವೇ ಮೂಲ ಅನಿಸುವುದಿಲ್ಲವೆ?

 


ಇತ್ತಿಚೆಗೆ ಕನ್ನಡ ಬಿಗಬಾಸ ಎಂಟನೆ ಆವೃತ್ತಿ ಅರ್ಧಕ್ಕೆ ನಿಂತದ್ದಂತೂ ಅದರ ವಿಕ್ಷಕರಿಗೆ ಬೇಸರದ ಸಂಗತಿಯಾಗಿತ್ತು. ಅದರಲ್ಲೂ ನಟ ಸುದೀಪ ಅಭಿಮಾನಿಗಳಿಗೆ ವಾರಕ್ಕೊಮ್ಮೆ ಅವರನ್ನು ನೋಡುವುದೆ  ಒಂದು ಸಂತಸದ ವಿಷಯವಾಗಿತ್ತು,    ಸ್ಪರ್ಧಿಗಳ ಅಭಿಮಾನಿಗಳು ಹಾಗೂ ಕುಟುಂಬದವರಿಗಂತೂ ಹಬ್ಬದ ವಾತಾವರಣವೆ ಸರಿ. ಕಾರ್ಯಕ್ರಮದಲ್ಲಿ ಎನನ್ನು ಕಲಿಯಲು ಇಲ್ಲ ಎಂಬುದನ್ನು ಹೊರತಾಗಿಯೂ ಸಹ ಲಕ್ಷಾಂತರ ಜನರು ಕಾರ್ಯಕ್ರಮವನ್ನು ವಿಕ್ಷಿಸುತ್ತಾರೆ, ಇದಕ್ಕೆ ಸತತವಾಗಿ ಎಂಟನೆ ಆವೃತ್ತಿ ಬಂದಿರುವುದೆ ಸಾಕ್ಷಿ.  

ನಿಮಗೆಲ್ಲರಿಗೂ ಗೊತ್ತಿರುವಂತೆ ಬಿಗಬಾಸ ಒಂದು ಮನರಂಜನೆಯ ಕಾರ್ಯಕ್ರಮ. ಇಲ್ಲಿ ಒಂದೆ ಮನೆಯಲ್ಲಿ ಹದಿನೈದು ಸ್ಪರ್ಧಿಗಳು ನೂರು ದಿನ ಬಂಧನದಲ್ಲಿರುತ್ತಾರೆ. ಮನೆಯ ತುಂಬ ಕ್ಯಾಮರಾಗಳು ಅವರ ವಿಕ್ಷಣೆಯಲ್ಲಿರುತ್ತಾರೆ. ವಾರಕ್ಕೊಮ್ಮೆ ಜನರಿಗೆ ಇಷ್ಟವಾಗದ ವ್ಯಕ್ತಿ ಮನೆಯಿಂದ ಹೊರಬರುತ್ತಾನೆ. ಹೀಗೆ ನೂರು ದಿನ ಕಳೆದಾಗ ಕೊನೆಯಲ್ಲಿ ಉಳಿಯುವ ಜನರ ಅಚ್ಚುಮೆಚ್ಚಿನ ವ್ಯಕ್ತಿಯನ್ನು ಗೆದ್ದ ಸ್ಪರ್ಧಿಯೆಂದು ಆಯ್ಕೆ ಮಾಡುತ್ತಾರೆ.ಇಂತಹ ಕಾರ್ಯಕ್ರಮ ಕೆಲವರಿಗೆ ಇಷ್ಟವಾಗುವುದು ಇಲ್ಲ, ಇದರ ಕಾರಣ ಹುಡುಕುತ್ತಾ ಹೋದಂತೆ ಅವರವರದ್ದೆ ಆದಂತಹ ಅಭಿಪ್ರಾಯಗಳು ಹುಟ್ಟುತ್ತವೆ. ಅವುಗಳಲ್ಲಿ ಪ್ರಮುಖವಾದವುದಳೆಂದರೆ

1) ಬಿಗಬಾಸ ಕಾರ್ಯಕ್ರಮದಿಂದ ಕಲಿಯಲು ಎನು ಇಲ್ಲ
2) ಬಿಗಬಾಸ ಕಾರ್ಯಕ್ರಮ ಸಂಪೂರ್ಣ ಪೂರ್ವ ನಿಯೋಜಿತ ಅಭಿನಯ
3) ಸ್ಪರ್ಧಿಗಳು ಅತಿಯಾಗಿ ಮತ್ತು ವಿಚಿತ್ರವಾಗಿ ಆಡುತ್ತಾರೆ
4) ಬಿಗಬಾಸ ಕಾರ್ಯಕ್ರಮದಲ್ಲಿ ಜಗಳ ಮಾಡುವುದೆ ಮನರಂಜನೆಯಾಗಿರುತ್ತದೆ
5) ಉತ್ತಮವಾಗಿ ಆಡುತ್ತಿದ್ದ ಸ್ಪರ್ಧಿಗಳನ್ನು ಕಾರಣವಿಲ್ಲದೆ ಹೊರ ಹಾಕುತ್ತಾರೆ

ಹೀಗೆ ಮುಂತಾದ ಇನ್ನೂ ಅನೇಕ ಕಾರಣಗಳಿಂದ ಬಿಗಬಾಸ ಜನರಿಗೆ ಇಷ್ಚವಾಗದೆ ಇರಬಹುದು ಆದರೆ ಇಷ್ಟವಾಗದವರೂ ಸಹ ಒಮ್ಮೆ ಬಿಗಬಾಸ ನೋಡಿಯೆ ಇರುತ್ತಾರೆ.  ಇವತ್ತಿಗೂ ಕನ್ನಡದ ಬಿಗಬಾಸನ ಮೊದಲನೆ ಆವೃತ್ತಿ ಜನರಿಗೆ ಅಚ್ಚುಮೆಚ್ಚಾಗಿ ಉಳಿದಿದೆ. ತದ ನಂತರ ಪ್ರಥಮ್ ಇದ್ದಂತಹ ಬಿಗಬಾಸ ಎಲ್ಲರಿಗೂ ಇಷ್ಟವಾಗಿತ್ತು. ಇಂತಹಲ ಬಿಗಬಾಸ ಕಾರ್ಯಕ್ರಮವನ್ನು ಕೆಲವರು ತಪ್ಪದೆ ನೋಡುತ್ತಾರೆ. ಈ ಕಾರ್ಯಕ್ರಮ ನೋಡಲು ಅವರಿಗೆ ಅವರದ್ದೆ ಆದ ಅಭಿರುಚಿ ಮತ್ತು ಕಾರಣಗಳಿರುತ್ತವೆ. ಇಂತಹ ಕಾರಣಗಳಲ್ಲಿ ಪ್ರಮುಖವಾದವೆಂದರೆ
1) ಅಚ್ಚು ಮೆಚ್ಚಿನ ಸ್ಪರ್ಧಿಗಳು - ಬಿಗಬಾಸ ಕಾರ್ಯಕ್ರಮಕ್ಕೆ ಬರುವವರಲ್ಲಿ ಪ್ರಮುಖರು ಸಿನಿಮಾ-ಧಾರಾವಾಹಿ ಕ್ಷೇತ್ರದ ಮೂಲದವರಾಗಿರುತ್ತಾರೆ. ಪ್ರತಿ ಸ್ಪರ್ಧಿಗಳು ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ಬಿಗಬಾಸ ಕಾರ್ಯಕ್ರಮ ವಿಕ್ಷಿಸುತ್ತಾರೆ.
2) ಮನರಂಜನೆ- ಬೆಳಿಗ್ಗೆಯಿಂದ ಸಂಜೆವರೆಗೂ ದುಡಿದ ದೇಹಕ್ಕೆ ಸಂಜೆಯ ಮನರಂಜನೆಗಾಗಿ ಬಿಗಬಾಸ ಕಾರ್ಯಕ್ರಮ ನೋಡುತ್ತಾರೆ
3) ನಟ ಸುದೀಪರನ್ನು ನೋಡವುದಕ್ಕಾಗಿ - ಚಲನಚಿತ್ರ ನಟ ಸುದೀಪ ಕರ್ನಾಟಕದಾಂತ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ವಾರಾಂತ್ಯದಲ್ಲಿ ಕಾರ್ಯಕ್ರಮ ನೆಡೆಸಿಕೊಡುವ ಸುದೀಪರನ್ನು ನೋಡಲು ಬಿಗಬಾಸ ಕಾರ್ಯಕ್ರಮ ನೋಡುತ್ತಾರೆ.
  • ಬಿಗಬಾಸ ಕಾರ್ಯಕ್ರಮ ಬದುಕಿಗೆ ಹತ್ತಿರವಾಗಿದೆ, 
  • ದೇವರು ಕಣ್ಣಿಗೆ ಕಾಣುವುದಿಲ್ಲ-ಬಿಗಬಾಸ ಸಹ ಕಾಣುವುದಿಲ್ಲ
  • ದೇವರಿಂದ ಆಜ್ಞೆಗಳು ಬರುತ್ತವೆ -ಬಿಗಬಾಸನಿಂದನೂ ಸ್ಪರ್ಧಿಗಳಿಗೆ ನೇರವಾಗಿ ಆಜ್ಞೆಗಳು ಬರುತ್ತವೆ
  • ಮನುಷ್ಯನ ಬದುಕು ನೂರು ವರ್ಷ-ಬಿಗಬಾಸ ಸ್ಪರ್ಧಿಗಳು ನೂರು ದಿನ 
  • ಸ್ವಾಮಿಗಳು-ಗುರುಗಳು- ಬಿಗಬಾಸಲನಲ್ಲಿ  ಸುದೀಪ
  • ಬದುಕಲ್ಲಿ ಸಾವು - ಬಿಗಬಾಸಲ್ಲಿ ಎಲಿಮಿನೇಷನ
  • ಬಿಗಬಾಸ ಮನೆ ಬಿಟ್ಟು ಹೊರ ಜಗತ್ತಿದೆ ಹಾಗೆ ಭೂಲೋಕವನ್ನು ಬಿಟ್ಟು ಇನ್ನೊಂದು ಲೋಕವಿದೆ.
  • ಬಿಗಬಾಸಮನೆಗೆ ಕೆಲವು ದಿನ ಮಾತ್ರ- ಬದುಕು ಸಹ ಕೆಲವು ದಿನ ಮಾತ್ರ

ಕೊನೆಯ ಮಾತು! ಅಂದುಕೊಂಡರೆ, ಎಲ್ಲರೂ ನಮ್ಮವರು. ಇಲ್ಲದಿದ್ದರೆ ಯಾರು ನಮ್ಮವರಲ್ಲ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot