ತಂಗಿಯ ಮದುವೆ ಅಕ್ಕನಿಗಿಂತ ಮುಂಚಿತವಾಗಿ ಆಗುವುದು ಸರಿಯೆ? - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಬುಧವಾರ, ಮೇ 19, 2021

ತಂಗಿಯ ಮದುವೆ ಅಕ್ಕನಿಗಿಂತ ಮುಂಚಿತವಾಗಿ ಆಗುವುದು ಸರಿಯೆ?



ದಾವಣಗೆರೆಯಲ್ಲಿ ಮಂಡಿಪೇಟೆ ಹತ್ತಿರ ಪವನ ದರ್ಶಿನಿ ಎಂದು ಹೋಟೆಲ್ ಇದೆ. ಆ ಹೋಟಲನ ಚಹಾ ಸ್ವಾಧಿಸದ ವ್ಯಕ್ತಿ ದಾವಣಗೆರೆಯಲ್ಲಿಯೆ ಯಾರು ಇಲ್ಲ ಎಂಬ ಮಾತಿದೆ. ಬೆಳಿಗ್ಗೆ ನಾಲ್ಕುವರೆಗೆ ಚಹಾದ ಮಾರಾಟ ಆರಂಭನಾದರೆ ರಾತ್ರಿ ಹನ್ನೊಂದಕ್ಕೆ ಮುಗಿಯೋದು. ಒಂದು ಲೆಕ್ಕದಲ್ಲಿ ಒಳ್ಳೆಯ ವ್ಯಾಪಾರ. ಈ ಪವನ ದರ್ಶಿನಿಯ ಮಾಲಿಕರೆ ನಮ್ಮ ರಾಮಣ್ಣ ಗೋವಿನಾಳ.

ರಾಮಣ್ಣ ಚಹಾ ವ್ಯಾಪರದಿಂದಲೆ ಒಂದು ಸುಂದರವಾದ ಮನೆಯನ್ನ ಕಟ್ಟಿದ್ದಾನೆ. ಮನೆ ಮೂರು ಕೋಣೆ ಹೊಂದಿದ್ದು ವಿಶಾಲವಾಗಿದೆ. ರಾಮಣ್ಣನ ಹೆಂಡತಿ ಸುಶೀಲಕ್ಕ ಮನೆಯನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟಿದ್ದಾಳೆ. ಸುಶೀಲಕ್ಕನ ಮಾಡಿದ ದೋಸೆ ತಿನ್ನೋದೆ ಒಂದು ಭಾಗ್ಯ. ಗರಿಗರಿಯಾಗಿರುವ ದೋಸೆ, ಜೊತೆಗೆ ಕೊಬ್ಬರಿ ಚಟ್ನಿ ಮೋಲೆ ಒಂಚೂರು ತುಪ್ಪ ತಿನ್ನುವುದಂದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೆ ಸರಿ.

 ರಾಮಣ್ಣನಿಗೆ ಮೂರು ಜನ ಮಕ್ಕಳು, ಮೊದಲೆರಡು ಹೆಣ್ಣು ಮಕ್ಕಳು ಅನ್ವಿತಾ ಮತ್ತು ಮಾನ್ವಿತಾ, ಮೂರನೇಯವನು ತನ್ವಿತ್. ಮೊದಲ ಮಗಳು ಅನ್ವಿತಾ ಇಂಗ್ಲೀಷ ಮಾಧ್ಯಮದಲ್ಲಿ ಕಲಿತು, ದಾವಣಗೆರೆಗೆ ಪ್ರಥಮ ಸ್ಪಾನದಲ್ಲಿ ಅಂಕಗಳನ್ನು ಪಡೆದು ಎಸ್ ಎಸ್ ಎಲ್ ಸಿ ಮುಗಿಸಿದ್ದಳು. ಪಿಯುಸಿ ಒದಿಗಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡಳು. ಅನ್ವಿತಾಳಿಗೆ ತಂದೆಯಿಂದ ದೂರ ಇರುವುದು ಅಸಾಧ್ಯದ ಮಾತಾಗಿತ್ತು ಆದರೆ ರಾಮಣ್ಣನಿಗೆ ಮಗಳನ್ನು ಇಂಜಿನಿಯರಿಂಗ ಒದಿಸುವ ಅತೀವವಾದ ಆಸೆ ಇತ್ತು. ಮಂಗಳೂರೆಂದರೆ ಪಿಯುಸಿ ಒದುವವರೆಲ್ಲರಿಗೆ ಉತ್ತಮ ಸ್ಥಳ ಎಂದು ತಂದೆ-ತಾಯಿಯರ ಭಾವಿಸಿದ್ದಾರೆ ಆದರೆ ಕೆಲವು ಮಕ್ಕಳಿಗೆ ಮಂಗಳೂರಿನ ಕಾಲೇಜುಗಳು ಜೈಲಿನಂತೆಯೆ ಸರಿ. ಹಣ ಕೊಟ್ಟು ಜೈಲು ಸೇರುವುದೆಂದರೆ ಮಂಗಳೂರಿನ ಪ್ರತಿಷ್ಥಿತ ಕಾಲೇಜುಗಳಲ್ಲಿ ಪಿಯಸಿ ಒದುವುದು.ಉತ್ತಮ ಅಂಕಗಳಿಸಿ ಪಿಯುಸಿ ಮುಗಿಸಿದ ಅನ್ವಿತಾ ಮುಂದೆ ಬೆಂಗಳೂರಿನಲ್ಲಿ ಇಂಜಿನಿಯರಿಂಗನಲ್ಲಿ ಪದವಿಯನ್ನು ಪಡೆದು ಸಾಫ್ಟವೇರ ಉದ್ಯೋಗಿಯಾಗಿದ್ದಾಳೆ.

ಎರಡನೆ ಮಗಳು ಮಾನ್ವಿತಾಳಿಗೆ ಒದಿನಲ್ಲಿ ಆಸಕ್ತಿ ಅಷ್ಚಾಗಿ ಇಲ್ಲ, ತಂದೆಯ ಒತ್ತಾಯದ ಮೇರೆಗೆ ಒದಿ, ಬಿಬಿಎ ಪದವಿ ಪಡೆದಿದ್ದಾಳೆ. ಕೆಲಸಕ್ಕೆ ಹೋಗದೆ ಮನೆಯಲ್ಲಿಯೆ ತಾಯಿಯ ಕೆಲಸಕ್ಕೆ ಅಷ್ಟೊ-ಇಷ್ಟೊ ಸಹಾಯ ಮಾಡುತ್ತಾಳೆ.  ಮಗನೂ ಸಹ ಡಿಪ್ಲೋಮಾ ಒದಿದ್ದಾನೆ. ಹೊರ ಊರಿನ ಕಂಪನಿಯಲ್ಲಿ ಕೆಲಸ ಸಿಕ್ಕರೂ ಹೋಗದೆ ತಂದೆಯೊಂದಿಗೆ ಹೋಟಲ ಕೆಲಸದಲ್ಲಿದ್ದಾನೆ. ರಾಮಣ್ಣನಿಗೂ ಮಗ ತನ್ನ ಜೊತೆ ಕೆಲಸಕ್ಕಿದಲ್ಲಿರುವುದು ಆನೆ ಬಲದಂತಾಗಿದೆ.

ರಾಮಣ್ಣ ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ವರಗಳನ್ನು ಹುಡುಕುತ್ತಿದ್ದಾನೆ. ಹಲವಾರು ಸಂಭಂಧಗಳು ಬಂದು ಹೋದರೂ ಸಹ ಹೊಂದಿಕೆಯಾಗಿರಲಿಲ್ಲ. ಬಂದಂತಹ ಸಂಭಂದಗಲ್ಲಿ ಹರಿಹರದ ಒಂದು ವೈದ್ಯ ಸಂಭಂದವೂ ಇತ್ತು. ಹರಿಹರದ ಸರಕಾರಿ ವೈದ್ಯನಾಗಿದ್ದವನು ಮನೋಹರ”. ಸರಕಾರಿ ಆಸ್ಪತ್ರೆಯಲ್ಲಿ ಕೆಲಸದೊಂದಿಗೆ ಒಂದು ಖಾಸಗಿಯಾಗಿ ಆಸ್ಪತ್ರೆಯನ್ನು ನೆಡೆಸುತ್ತಿದ್ದನು. ಹೆಚ್ಚು ಕಡಿಮೆ ತಿಂಗಳಿಗೆ ಎರಡು ಲಕ್ಷದ ಆಧಾಯ ಅವನದು.ಜೊತೆಗೆ ವಂಶಪಾರಂಪರ್ಯವಾಗಿದ್ದ ತೋಟದ ಆಧಾಯ. ಹಣಕಾಸಿಗೇನು ಕೊರತೆಯನ್ನೆ ಕಂಡಿರದ ಕುಟುಂಬದವನು.

ಮನೋಹರ ಅಕ್ಕ ಅನ್ವಿತಾಳನ್ನು ನೋಡಳು ಬಂದಾಗ ತಂಗಿಯನ್ನು ನೋಡುತ್ತಾನೆ. ಅಕ್ಕನಿಗಿಂತ ತಂಗಿಯೆ ಅವನಿಗೆ ಇಷ್ಟವಾಗುತ್ತಾಳೆ. ತಂಗಿಯನ್ನು ಮದುವೆಯಾಗುವುದಾಗಿ ತನ್ನ ತಂದೆ ತಾಯಿಯರಿಗೆ ತಿಳಿಸುತ್ತಾನೆ. ಈ ಸಂಭಂದದ ಪ್ರಸ್ತಾಪವೂ ರಾಮಣ್ಣನ ಮುಂದೆ ಬರುತ್ತದೆ.

ರಾಮಣ್ಣನಿಗೆ ಒಂದರ್ಥದಲ್ಲಿ ಈ ವಿಚಾರ ತಿಳಿದಾಗ ಆಶ್ಚರ್ಯದ ಜೊತೆಗೆ ಗೊಂದಲದ ಒಳಗಾಗುತ್ತಾನೆ. ಹಣವಂತರ ಸಂಭಂದ ಜೊತೆಗೆ ಒಳ್ಳೆಯ ಮನೆತನ ಆದರೆ ಅವರ ಈ ನಿರ್ಧಾರ ಸರಿ ಅನಿಸಲಿಲ್ಲ. ತನ್ನ ಹೆಂಡತಿ ಸುಶೀಲಕ್ಕಳಿಗೆ ವಿಷಯ ತಿಳಿಸುತ್ತಾನೆ. ಸುಶೀಲಕ್ಕ ಯಾರನ್ನು ಮದುವೆಯಾದರೇನು ನಮ್ಮ ಮಗಳೆ ಅಲ್ಲವೆ? ಚಿಕ್ಕ ಮಗಳ ಜೀವನವೂ ಸುಂದರವಾಗಿರುತ್ತರೆಎಂದಳು. ಮದುವೆಗೆ ಚಿಕ್ಕ ಮಗಳು ಮಾನ್ವಿತಾ ಸಹ ಒಪ್ಪುತ್ತಾಳೆ. ಮದುವೆಯೂ ನಿಶ್ಟಯವಾಗುತ್ತದೆ.ಮದುವೆ ದಿನಾಂಕ ನಿರ್ಧಾರವಾಗುತ್ತದೆ.

ಈ ಎಲ್ಲ ಬೆಳವಣಿಗೆಗಳಿಂದ ದೊಡ್ಡ ಮಗಳು ಅನ್ವಿತಾ ಅಕ್ಷರಷಹ ನೊಂದಿರುತ್ತಾಳೆ. ತನ್ನ ನೋಡಲು ಬಂದ ಹುಡುಗನು ತನ್ನನ್ನು ತಿರಸ್ಕರಿಸಿದ್ದಷ್ಟೆ ಅಲ್ಲದೆ ತನ್ನ ತಂಗಿಯನ್ನು ಇಷ್ಟ ಪಟ್ಟಿದ್ದು ಸರಿ ಎಂದನಿಸಲಿಲ್ಲ. ತಂದೆ-ತಾಯಿಯರು ಈ ಸಂಭಂದಕ್ಕೆ ಒಪ್ಪಿರುವುದು ಅವಳಿಗೆ ದುಖ: ಮಿಶ್ರಿತ ಮುಜುಗರವಾಗಿದೆ. ತಂದೆ-ತಾಯಿಯ ಮೇಲೆ ಕೋಪಗೊಂಡು ತಂಗಿಯ ಮದುವೆಯ ಯಾವುದೆ ಕಾರ್ಯದಲ್ಲಿ ಭಾಗವಹಿಸದೆ, ಅತಿಥಿಯಂತೆ ಮದುವೆಗೆ ಮಾತ್ರ ಬೆಂಗಳೂರಿನಿಂದ ಬಂದು ಹೋಗುತ್ತಾಳೆ.

ಹೆಚ್ಚು ಕಡಿಮೆ ಒಂದು ವರ್ಷ ದಾವಣಗೆರೆಗೆ ಬರದೆ ಬೆಂಗಳೂರಿನಲ್ಲಿಯೆ ಇರುತ್ತಾಳೆ. ರಾಮಣ್ಣನಿಗೂ ಸಹ ದೊಡ್ಡಮಗಳ ಕುರಿತಾಗಿ ಬೇಸರವಾಗಿರುತ್ತದೆ. ಈಗ ಅವನು ದೊಡ್ಡ ಮಗಳು ಮದುವೆ ಮಾಡಬೇಕೆಂದು ಆಸೆಯಲ್ಲಿ ಹಲವಾರು ಸಂಭಂದಗಳನ್ನು ಹುಡುಕುತ್ತಿದ್ದಾನೆ. ಎಲ್ಲ ಸಂಭಂದಗಳು ಅನ್ವಿತಾಳನ್ನು ತಿರಸ್ಕರಿಸುತ್ತವೆ. ತಂಗಿಯ ಮದುವೆ ಮೊದಲಾಗಿರುವುದರಿಂದ ಅಕ್ಕನಲ್ಲಿ ಎನೋ ಸಮಸ್ಯೆ ಇದೆ ಎಂದು ಹಲವರ ಅನುಮಾನದಿಂದ ತಿರಸ್ಕರಿಸಿದ್ದೆ ಹೆಚ್ಚು,

 ಅನ್ವಿತಾಳಿಗೆ ತನ್ನ ತಂಗಿಗಿಂತಲೂ ಉತ್ತಮ ಹಣವಂತನನ್ನು ಮದುವೆಯಾಗಬೇಕೆಂಬ ಹಠ. ಹೀಗೆಯೆ ಎರಡು-ಮೂರು ವರ್ಷಗಳು ಕಳೆದಾಗಲೂ ಸಹ ಅನ್ವಿತಾಳಿಗೆ ಮದುವೆಯಾಗುವುದಿಲ್ಲ.

ರಾಮಣ್ಣನ ಹತ್ತಿರದ ಸಂಭಂದದಲ್ಲಿ ಹರೀಶ ಎಂಬ ಹುಡುಗ ಇದ್ದಾನೆ. ಅವನು ಕೆಎಎಸ ಪಾಸು ಮಾಡಿರುವ ಅಧಿಕಾರಿ. ಭರಮಸಾಗರದ ತಹಸಿಲ್ಜಾರ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.ಕೆಎಎಸ ಅಧಿಕಾರಿಯೆಂದರೆ ಲಂಚದ ಹಣ ತಾನೆ ಹುಡುಕಿಕೊಂಡು ಬರುವುದು ಸಹಜದ ವಿಷಯ. ಹರೀಶ ತೀರ ಬಡತನದಿಂದ ಬೆಳೆದವನು. ಕಷ್ಟ ಪಟ್ಟು ವಿದ್ಯಾಭ್ಯಾಸ ಮುಗಿಸಿ ಕೆಎಎಸ ಪಾಸುಮಾಡಿದ್ದಾನೆ. ಕಳೆದ ವರ್ಷ ಮದುವೆಯಾಗಿತ್ತು. ದುರದೃಷ್ಟ ಎಂದರೆ ಮದುವೆಯಾಗಿ ಕೆಲವೆ ದಿನಗಳಲ್ಲಿ ಅವನ ಹೆಂಡತಿ ಅಫಘಾತದಲ್ಲಿ ತೀರಿಹೋಗಿದ್ದಳು.

ಹರೀಶನಿಗೆ ಎರಡನೆ ಮದುವೆಗೆ ಹೆಣ್ಣು ಹುಡುಕುತ್ತಿರುವುದು ಮದುವೆ ಮಾಡಿಸುವ ಮಧ್ಯವರ್ತಿಗಳಿಂದ ರಾಮಣ್ಣನಿಗೆ ಗೋತ್ತಾಗುತ್ತದೆ. ಹರೀಶನೂ ಸಹ ಮಧ್ಯವರ್ತಿಗಳು ಮಧ್ಯವರ್ತಿಗಳ ಮುಖಾಂತರ ರಾಮಣ್ಣನಿಗೆ ಅನ್ವಿತಾಳ ಮದುವೆಯಾಗುವ ವಿಷಯ ಪ್ರಸ್ತಾಪಿಸುತ್ತಾನೆ.

ಎರಡನೆ ಸಂಭಂಧವಾಗಿ ಹರೀಶನನ್ನು ಮದುವೆಯಾಗಲೂ ಅನ್ವಿತಾಳಿಗೆ ಒಂಚೂರು ಇಷ್ಟವಿಲ್ಲ. ಎರಡನೆ ಸಂಭಂಧ ಎಂಬುದರ ಹೊರತಾಗಿ ಹರೀಶ ಯಾವುದರಲ್ಲೂ ಕಡಿಮೆ ಇರಲಿಲ್ಲ, ಅದರಲ್ಲೂ ತನ್ನ ತಂಗಿಯ ಗಂಡನಿಗಿಂತ ಉನ್ನತ ಅಧಿಕಾರಿ, ಸಂಪಾದನೆಯಲ್ಲೂ ಅಧಿಕವೆಂದು ಅನ್ವಿತಾ ಮದುವೆಗೆ ಒಪ್ಪುತ್ತಾಳೆ. ಮದುವೆಯೂ ಆಗುತ್ತದೆ.

ಈಗ ಹರೀಶ-ಅನ್ವಿತಾ ದಂಪತಿಗಳಿಗೆ ಎರಡು ಮಕ್ಕಳು.ಇತ್ತಿಚೆಗೆ ಮನೆಯನ್ನು ಕಟ್ಟಿಕೊಂಡು ಸುಖವಾಗಿದ್ದಾರೆ.


ಈ ಕಥೆ ಕೆವಲ ಕಾಲ್ಪನಿಕ, ಕಥೆ ಇಷ್ಟವಾದರೆ ನಿಮ್ಮ ಅಭಿಪ್ರಾಯ ತಿಳಿಸಿ

ಈ ಕಥೆ ಕೆವಲ ಕಾಲ್ಪನಿಕ, ಕಥೆ ಇಷ್ಟವಾದರೆ ನಿಮ್ಮ ಅಭಿಪ್ರಾಯ ತಿಳಿಸಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot