ಒಂದೆ ಆವಾಜನಿಂದ ಪವಾಡ ಮಾಡಿದ ಚಾಲೆಂಜಿಂಗ್ ಸ್ಟಾರ ದರ್ಶನ ಕರ್ನಾಟಕವೇ ಶರಣಾಯಿತು - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಬುಧವಾರ, ಜೂನ್ 23, 2021

ಒಂದೆ ಆವಾಜನಿಂದ ಪವಾಡ ಮಾಡಿದ ಚಾಲೆಂಜಿಂಗ್ ಸ್ಟಾರ ದರ್ಶನ ಕರ್ನಾಟಕವೇ ಶರಣಾಯಿತು

ಒಂದೆ ಆವಾಜನಿಂದ ಪವಾಡ ಮಾಡಿದ ಚಾಲೆಂಜಿಂಗ್ ದರ್ಶನ್- ಕರ್ನಾಟಕವೇ ಶರಣಾಯಿತು 




ಚಾಲೆಂಜಿಂಗ್ ದರ್ಶನ್ ಅವರ ಕೂಗಿಗೆ ಕರ್ನಾಟಕವೇ ಒಂದಾಗಿ ನಿಂತಿದೆ಼.

2019ರ ಕೊರೊನಾ ಭಾರತ 2020ಕ್ಕೆ ಫೆಬ್ರವರಿಯಲ್ಲಿ ಬಂದಿತು. ಅದ ನಂತರ ನಾವೆಲ್ಲರೂ ನರಳಾಡುತ್ತಿವೆ. ಒಂದನೆ ಅಲೆಯಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿ ನಷ್ಟ ಅನುಭವಿಸದಿದ್ದರೂ ಎರಡನೇ ಅಲೆಯ ಹೊಡೆತಕ್ಕೆ  ಪ್ರತಿಯೊಬ್ಬರು ಆರ್ಥಿಕವಾಗಿ ನರಳಾಡುತ್ತಿದ್ದಾರೆ. ದಿನಗೂಲಿ ಕೆಲಸಗಾರರು ಊಟಕ್ಕೆ ಪರದಾಡುತ್ತಿದ್ದಾರೆ. ಖಾಸಗಿ ಕೆಲಸಗಾರರ ಸಂಬಳಗಳು ನಿಂತಿವೆ.

        ಕರೋನಾ ಕಾರಣದಿಂದ ಅನೇಕ ಜೀವಿಗಳು ತತ್ತರಗೊಂಡಿವೆ. ಇವುಗಳಲ್ಲಿ ಮಾನವರು ಆರ್ಥಿಕವಾಗಿ ಹೊಡೆತ ಬಿದ್ದದೆ. ಪ್ರಾಣಿಗಳು ಸಹ ಆಹಾರಕ್ಕಾಗಿ ಹಾಹಾಕಾರ ಮಾಡುತ್ತಿವೆ. ಹೋಟೆಲ್ ನ ಮುಸುರೆಯನ್ನು ತಿಂದು ಬದುಕುತ್ತಿದ್ದ ನಾಯಿಗಳು ಮತ್ತು ಹಂದಿಗಳು ಹೋಟೆಲ್ ಬಂದ್ ಆಗಿದ್ದರಿಂದ ಪ್ರಾಣವನ್ನು ಬಿಟ್ಟಿರುವ ಅನೇಕ ಉದಾಹರಣೆಗಳಿವೆ. ಬಿದಿ ನಾಯಿಗಳು ತಮ್ಮದೇ ಆದಂತಹ ಆಹಾರ ವ್ಯವಸ್ಥೆಯನ್ನು ನಂಬಿದ್ದವು. ಅವುಗಳು ಕೂಡ ತತ್ತರಿಸಿಹೋಗಿವೆ.
     
ಮೃಗಾಲಯದ ಪ್ರಾಣಿಗಳಿಗೂ ಸಹ ಆರ್ಥಿಕ ಹೊಡೆತಕ್ಕೆ ಬಿದ್ದಿವೆ. ಹೀಗಾಗಿ ಮೃಗಾಲಯಕ್ಕೆ ಬೇಕಾದ ಆಹಾರ ಪೂರೈಕೆಗೆ ಬೇಕಾಗುವಷ್ಟು ಹಣ ಮೃಗಾಲಯ ಸಿಬ್ಬಂದಿ ಹೊಂದಿಸಬೇಕಾದ ಅನಿವಾರ್ಯತೆ ಬಂದಿತ್ತು.

 ಇದನ್ನು ಅರಿತ ಮೃಗಾಲಯದ ಸಿಬ್ಬಂದಿಗಳು ಚಾಲೆಂಜಿಂಗ್*ದರ್ಶನ್ ಅವರನ್ನು ಸಂಪರ್ಕಿಸಿದರು. ಮೊದಲೇ  ನಮಗೆ ಗೊತ್ತಿರುವಂತೆ ಚಾಲೆಂಜಿಂಗ್ ಸ್ಟಾರ ನಟ ದರ್ಶನ್ ಪ್ರಾಣಿಗಳ ಪ್ರೇಮಿ. ಪ್ರಾಣಿಗಳಿಗೆ ತುರ್ತು ಆಹಾರದ ಅಭದ್ರತೆ ಒದಗಿದಾಗ ವಿಡಿಯೋ ಮುಖಾಂತರ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರುನಾಡಿಗೆ ಕರೆಕೊಟ್ಟರು. 
 
ಅವರ ಮಾತಿನಂತೆ ಕರುನಾಡ ಜನತೆ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡು. ಪ್ರಾಣಿಗಳಿಗೆ ಬೇಕಾಗುವ ಆಹಾರ ಮತ್ತು ಇತರೆ ಅವಶ್ಯಕತೆಗಳನ್ನು ಬೇಕಾಗುವ ಹಣವನ್ನು ಮೃಗಾಲಯಕ್ಕೆ ಕೊಟ್ಟರು.  ಮೃಗಾಲಯ ಬಂದ ಹಣದಿಂದ ಪ್ರಾಣಿಯನ್ನು ಸುರಕ್ಷಿತ ನೋಡಿಕೊಂಡು ಹೋಗುತ್ತಿದ್ದಾರೆ.

 ದರ್ಶನ್ ಅವರ ಕರೆಗೆ ಓಗೊಟ್ಟ ಉಪೇಂದ್ರ ಸಹ   ಒಂದು ಆಫ್ರಿಕಾದ ಆನೆಯನ್ನು ದತ್ತು ಪಡೆದರು. ಅದರ ಜೊತೆಗೆ ಬಿಗ್ ಬಾಸ್ ಖ್ಯಾತಿಯ ಚಂದ್ರಚೂಡ ಅವರು ಸುಮಾರು ಇಪ್ಪತ್ತೈದು ಪಕ್ಷಿಗಳನ್ನು ಇತ್ತೀಚೆಗೆ ನಿಧನರಾದ ದಿವಂಗತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ದತ್ತು ಪಡೆದರು.
 
ಹೀಗೆ ಅನೇಕರು ಪ್ರಾಣಿಗಳನ್ನು ದತ್ತು ಪಡೆದರು. ಇವತ್ತು ಮೃಗಾಲಯದ ಪ್ರಾಣಿಗಳಿಗೆ ಆಹಾರ ದೊರಕುವಂತೆ ಮಾಡಿದ ದರ್ಶನ್ ಅವರಿಗೆ ನಾವು ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರೂ ಕಡಿಮೆಯೇ ಸರಿ.

ದರ್ಶನ್ ಅವರ ದರ್ಶನ್ ಅವರು ಕೂಗಿಗೆ ಕರುನಾಡೆ ಪ್ರತಿಕ್ರಿಸಿದ್ದು ಮೆಚ್ಚಬೇಕಾದ ಸಂಗತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot