ರೋಹಿತ ಶರ್ಮಾ ಮೊದಲು, ಮೊಹಮದ್ ಶಮಿ ಕೊನೆಯಲ್ಲಿ ಎಕೆ ಬ್ಯಾಟಿಂಗ ಮಾಡಬೇಕು? ಬನ್ನಿ ಬ್ರಾಹ್ಮಣ ದೌರ್ಜನ್ಯದ ವಿರುದ್ಧ ಹೋರಾಡೋಣ! - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಬುಧವಾರ, ಜೂನ್ 23, 2021

ರೋಹಿತ ಶರ್ಮಾ ಮೊದಲು, ಮೊಹಮದ್ ಶಮಿ ಕೊನೆಯಲ್ಲಿ ಎಕೆ ಬ್ಯಾಟಿಂಗ ಮಾಡಬೇಕು? ಬನ್ನಿ ಬ್ರಾಹ್ಮಣ ದೌರ್ಜನ್ಯದ ವಿರುದ್ಧ ಹೋರಾಡೋಣ!




ಎಡಪಂಥಿಯ ವಾದಕ ಮತ್ತು ನಟ ಚೇತನ್ ಇವರು ಇತ್ತೀಚಿನ ಹೇಳಿಕೆಗಳು ಸದಾ ವಿವಾದವನ್ನು ಉಂಟು ಮಾಡುತ್ತವೆ. ಮೇಲ್ನೋಟಕ್ಕೆ ಅವರು ಸಮಾನತೆ ಅಂಬೇಡ್ಕರ್ ವಾದ ಮತ್ತು ಬಸವ ತತ್ತ್ವಗಳ ಪ್ರತಿಪಾದಕರಂತೆ ಕಂಡರು ಒಳಗೊಳಗೆ ಬ್ರಾಹ್ಮಣರನ್ನು ಮತ್ತು ಹಿಂದು ಧರ್ಮದವರನ್ನು ದ್ವೇಷಿಸುವ ಹುನ್ನಾರದ ಭಾವನೆಯನ್ನು ಹೊಂದಿದ್ದಾರೆ. 


ಇತ್ತೀಚೆಗೆ ಅವರ ಬ್ರಾಹ್ಮಣ ವಿರೋಧಿ ಹೇಳಿಕೆ ಮತ್ತು ಬ್ರಾಹ್ಮಣ್ಯದ ಕುರಿತಾದ ಹೇಳಿಕೆಗಳು ಬ್ರಾಹ್ಮಣ ಸಮಾಜದ ಮನಸ್ಸಿಗೆ ನೋವನ್ನುಂಟು ಮಾಡಿದ್ದು , ಸದಾ ಶಾಂತಿ ಮತ್ತು ಸಂಯಮದ ಮಂತ್ರ ಪಠಿಸುವ ಬ್ರಾಹ್ಮಣರು ಕಾನೂನಾತ್ಮಕವಾಗಿ ಚೇತನ್ ಗೆ ಪಾಠ ಕಲಿಸುವ ಉದ್ದೇಶದಿಂದ ಅವರನ್ನು 2 ಬಾರಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಸಿದ್ದಾರೆ.


ಹಿಂದೂ ಧರ್ಮದ ಆಚರಣೆಗಳನ್ನು ಚಾಚೂ ತಪ್ಪದೇ ಮಾಡುವ ಬ್ರಾಹ್ಮಣರನ್ನು  ವಿರೋಧಿಸಿದರೆ ಹಿಂದೂ ಧರ್ಮದ ಕಳಶಪ್ರಾಯ ವನ್ನೇ ಕಳಚಿದಂತಾಗುತ್ತದೆ ಎಂಬ ಭಾವನೆಯಿಂದ ಬ್ರಾಹ್ಮಣರನ್ನೇ ನೇರ ಗುರಿಯಾಗಿಟ್ಟುಕೊಂಡು ಎಡಪಂಥೀಯರು ಹೋರಾಟವನ್ನು ಸದಾ ಮಾಡುತ್ತಿರುತ್ತಾರೆ.


ಇವರಿಗೆ ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸುವ ಉದ್ದೇಶ ಯಾವತ್ತೂ ಇಲ್ಲ ಹಾಗೊಂದು ವೇಳೆ ಇದ್ದಿದ್ದರೆ ಕ್ರಿಶ್ಚಿಯನ್ನರು ಮತಾಂತರ ಮತ್ತು ಇಸ್ಲಾಮಿಗರ ಭಯೋತ್ಪಾದನೆ ಯನ್ನು ವಿರೋಧಿಸುತ್ತಿದ್ದರು ಆದರೆ ಹಲವಾರು ಬಾರಿ ಭಯೋತ್ಪಾದಕರು ಪ್ರಪಂಚದಾದ್ಯಂತ ದಾಳಿ ಮಾಡಿದರೂ ಸಹ ಭಯೋತ್ಪಾದನೆ ವಿರೋಧವಾಗಿ ಒಂದೇ ಒಂದು ಹೇಳಿಕೆಯನ್ನು ಇವರು ಕೊಟ್ಟಿಲ್ಲ. 


ಚೇತನ ಮತ್ತು ಎಡಪಂಥೀಯರ ವಾದದ ಪ್ರಕಾರ ಭಾರತದಲ್ಲಿ ಸೆಕ್ಯುಲರಿಸಂ ಎಂದರೆ ಹಿಂದೂ ಧರ್ಮದ ಆಚರಣೆಗಳನ್ನು ಮತ್ತು ಹಿಂದೂ ಧರ್ಮವನ್ನು ಕಟ್ಟಾ ಅನುಯಾಯಿ ಅನುಯಾಯಿಯಾಗಿ ಪಾಲಿಸುವ ಪಾಲಿಸುವವರನ್ನು ವಿರೋಧಿಸುವುದು ಇವರಿಗೆ ಜಾತೀಯತೆ ಅಸ್ತ್ರವಾಗಿದೆ ಅಷ್ಟೆ 


ಆಂಜನೇಯ ಭಕ್ತ ಮತ್ತು ಹಿಂದೂ ಧರ್ಮದ ಪ್ರತಿಪಾದಕನಾಗಿದ್ದ ಅರ್ಜುನ್ ಸರ್ಜಾ ರವರನ್ನು ಮೀಟು ಆಪಾದನೆಯಲ್ಲಿ ಸಿಕ್ಕು ಹಾಕಿಸುವ ಪ್ರಯತ್ನದಲ್ಲಿ ಎಡಪಂಥೀಯರ ನೇರ ಕೈವಾಡವಿತ್ತು. ಇದಕ್ಕೆ ಶೃತಿ ಹರಿಹರನ್ ಮೀಟೂ ಆರೋಪ ಮಾಡಿದಾಗ ಎಲ್ಲ ಎಡಪಂಥೀಯರೂ ಶೃತಿಹರನಿಗೆ ಬೆಂಬಲಿಸಿ ಬೆಂಬಲ ಕೊಟ್ಟಿದ್ದು ಸಾಕ್ಷಿಯಾಗಿದೆ. ಸತ್ಯಕ್ಕೆ ದೇವರು ಎಂಬಂತೆ ಅರ್ಜುನ್ ಸರ್ಜಾ ಶ್ರುತಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನಾತ್ಮಕವಾಗಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.


    ಇತ್ತೀಚಿನ ಬ್ರಾಹ್ಮಣರ ವಿರುದ್ಧ ಹೇಳಿಕೆಗಳು ಹೇಗಿದೆಯೆಂದರೆ ರೋಹಿತ್ ಶರ್ಮಾ ಆರಂಭಿಕ ದಾಂಡಿಗನಾಗಿ ಕ್ರಿಕೆಟ್ಟಲ್ಲಿ ಭಾರತದ ಪರ ಆಡುತ್ತಾನೆ. ಮೊಹಮ್ಮದ್ ಶಮಿ ಬೌಲರ್ ಆಗಿ ಕೊನೆಯಲ್ಲಿ ದಾಂಡಿಗನಾಗಿ ಬರುವುದು ಕ್ರಿಕೆಟ್ನಲ್ಲಿ ಸಹಜ. ಇಂಥ ಇಂತಹ ಸಂದರ್ಭ ಪರಿಸ್ಥಿತಿಗಳಲ್ಲೂ ಸಹ ರೋಹಿತ್ ಶರ್ಮ ನನ್ನು ಕೇವಲ ಬ್ರಾಹ್ಮಣನೆಂಬ ದೃಷ್ಟಿಯಿಂದ ನೋಡಿ ಇದು ಬ್ರಾಹ್ಮಣರ ಅಸಮಾನತೆಯೆಂದು ಬಿಂಬಿಸುವಲ್ಲಿಯೂ ಸಹ ಚೇತನ್ ಹಿಂಜರಿಯುವುದಿಲ್ಲ 

    

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot