ಚಿತ್ರದುರ್ಗ ಕೋವಿಡ ಲಸಿಕೆ ವಿತರಣೆಯಲ್ಲೊಂದು ಹಗರಣ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಸೋಮವಾರ, ಜೂನ್ 14, 2021

ಚಿತ್ರದುರ್ಗ ಕೋವಿಡ ಲಸಿಕೆ ವಿತರಣೆಯಲ್ಲೊಂದು ಹಗರಣ

ಚಿತ್ರದುರ್ಗದ ವ್ಯಾಕ್ಸಿನ್ ಕೇಂದ್ರದಲ್ಲಿ ಅನೇಕ ರೀತಿಯ ಗೊಂದಲಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ.




ನರೇಂದ್ರ ಮೋದಿ ತಮ್ಮ ಸರಕಾರದಿಂದ ಉಚಿತವಾಗಿ ಜನಗಳಿಗೆ ಕರೋನಾ ಲಸಿಕೆ ಹಂಚುತ್ತಿದ್ದಾರೆ ಆದರೆ ಕೆಲವು ಕೋವಿಡ ವಾರಿಯರ್ಸ ಎಂದು ಕರೆಯಿಸಿಕೊಳ್ಲುವ ವೈದ್ಯಕೀಯ ಸಿಬ್ಬಂಧಿ ಹಾಗೂ ಪೋಲಿಸ ಅಧಿಕಾರಿಗಳ ದುರಾಸೆಯಿಂದ ಲಸಿಕೆಯನ್ನು ಹಾಕಿಸಿಕೋಳ್ಳಲು ಹಣ ಕೋಡುವ ಪರಿಸ್ಛಿತಿ ಬಂದಿದೆ.ಉಳ್ಳವರು ಸರಧಿಯಿಲ್ಲದೆ ನೇರವಾಗಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಬಡವರು ಸರಧಿಯಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಸರಧಿಯಲ್ಲಿ ತಪ್ಪಿಸಲು ವೈದ್ಯಕೀಯ ಸಿಬ್ಬಂಧಿ ಹಾಗೂ ಪೋಲಿಸ ಅಧಿಕಾರಿಗಳಿಗೆ ಹಣ ಕೊಡುವ ಅರಾಜಕ ಸ್ಥಿತಿ ಬಂದಿದೆ.

ಚಿತ್ರದುರ್ಗ ಜೂನಿಯರ್ ಗರ್ಲ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ವ್ಯಾಕ್ಸಿನ್ ಡ್ರೈವ್ ನಲ್ಲಿ ಕೆಲವು ಮೆಡಿಕಲ್ ವಿಭಾಗದ ತಜ್ಞರು ತಮಗೆ ಬೇಕಾದವರಿಗೆ ಮಾತ್ರ ವ್ಯಾಕ್ಸಿನ್ ನೀಡುತ್ತಾರೆ. ಉದಾಹರಣೆಗೆ ೧೦೦ ವ್ಯಾಕ್ಸೀನ್ ಗಳು ಇದ್ದರೆ ಅದರಲ್ಲಿ ಶೇ ಅರುವತ್ತು ರಷ್ಟು ಜನರಿಗೆ ನೀಡಿ, ನಂತರ ಬಂದವರಿಗೆ ಇಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಜನರು ಹೋದ ನಂತರ ತಮಗೆ ಬೇಕಾದವರಿಗೆ ಕರೆ ಮುಖಾಂತರ ಯಾವುದೊಂದು ಸಂವಹನ ನಡೆಸಿ ಅವರಿಗೆ ಜನರು ಹೋದ ಸಮಯವನ್ನು ನೀಡಿ ಆ ಸಮಯದಲ್ಲಿ ಹೆಚ್ಚುವರಿ ಹಣವನ್ನು ಸಂಗ್ರಹಿಸಿ ನೀಡುತ್ತಾರೆ.

ಸಿಂಗಲ್ ಸಾರ್ ಪೋಲಿಸ ಆಫೀಸರ್ ಕೂಡ ಶಾಮೀಲಾಗಿದ್ದಾರೆ ಇವರೆಲ್ಲರೂ ಒಟ್ಟಾಗಿ ಸೇರಿ ನಿತ್ಯ ಕಡಿಮೆ ಎಂದರೂ ಕೂಡ ಐವತ್ತರಿಂದ ಅರುವತ್ತು ವ್ಯಾಕ್ಸೀನನ್ನು ಹಣದೊಂದಿಗೆ ನೀಡುತ್ತಿದ್ದಾರಂತೆ. ಹೀಗೆ ಹಲವಾರು ಜನರು ಪೊಲೀಸರ ಕುರಿತು ಊಹಾಪೋಹಗಳನ್ನು ಹೊರ ಹಾಕುತ್ತಿದ್ದ ಸಮಯದಲ್ಲಿ ಅಲ್ಲಿ ಹೋದಾಗ ನಮಗೂ ಸಹ ಇದೆ ಅನಿಸಿತು.ಅಲ್ಲಿ ಕೆಲಸ ಮಾಡುತ್ತಿದ್ದ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯ ನಡೆಯುವ ನಮಗೆ ಅನುಮಾನ ಮೂಡಿಸಿತ್ತು.

ಮುಖ್ಯವಾಗಿ ಇಲ್ಲಿ ಅನುಮಾನ ಬರಲು ಹಲವಾರು ಕಾರಣಗಳಿವೆ ಅವುಗಳಲ್ಲಿ ಪ್ರಮುಖವಾಗಿ ಇರುವ ಅಂಶ ಯಾವುದೆಂದರೆ ಜನರಿಗೆ ವ್ಯಾಕ್ಸಿನ್ ಕುರಿತಾಗಿ ಗೊಂದಲವನ್ನು ಸೃಷ್ಟಿ ಮಾಡುವುದು ನಂತರ ಕೋವಿ ಶೀಲ್ಡನ್ನು ನಿಮಗೆ ಕೊಡಬೇಕು ಆ ವ್ಯಾಕ್ಸಿನ್ ಇಲ್ಲ  ಎಂದು ಹೇಳುತ್ತಾರೆ. ನಾವೀಗ ಬಂದವರಿಗೆ ಕೋವ್ಯಕ್ಸಿನ್ ನೀಡುತ್ತಿದ್ದೇವೆ ಆದಕಾರಣ ನೀವು ಕಾಯಬೇಕು ಎಂದು ಹೇಳಿ ಜನರನ್ನು ಸುಮಾರು ಒಂದರಿಂದ 4 ಗಂಟೆ ಕಾಯಿಸುತ್ತಾರೆ ಆದರೆ ಕೆಲವರು ಸರದಿಯಲ್ಲಿ ನಿಲ್ಲದೇ ನೇರವಾಗಿ ಜನರ ಮುಂದೆಯೇ ತಮಗೆ ಬೇಕಾದ ಕೋವಿಡ್-ಶಿಲ್ಡ ಹಾಕಿಸಿಕೊಂಡು ಹೋಗುತ್ತಿದ್ದರು.

ನಿಷ್ಟಾವಂತ ಕೆಲವು ಪೊಲೀಸರ ಮಧ್ಯ ಇಂಥ ಕೆಲವು ಪೊಲೀಸರು ಪೊಲೀಸ್ ಇಲಾಖೆಯ ಗೌರವವನ್ನು ಗೌರವವನ್ನು ಹಾಳು ಮಾಡುತ್ತಾರೆ. ಇದೇ ರೀತಿ ಓವಿಡ್ ವೈದ್ಯರಾಗಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಮಧ್ಯೆಯೂ ಸಹ ಕೆಲವು ಇಂತಹ ವೈದ್ಯಕೀಯ ಸಿಬ್ಬಂದಿಗಳು ಅಪವಾದವಾಗಿ ಇರುತ್ತಾರೆ

ಕೋಟೆ ನಗರಿ ಇತಿಹಾಸ ಪ್ರಸಿದ್ಧ ಇಂಥ ಕೋಟೆ ನಗರಿಯಲ್ಲಿ ಕೋವಿಡ್ ಲಸಿಕೆಗಾಗಿ ತಾತ್ಕಾಲಿಕ ಆಹಾಕಾರವನ್ನು ಸೃಷ್ಟಿ ಮಾಡುತ್ತಿದ್ದಾರೆ.ಇಂಥ ಪೋಲಿಸ ಸಿಬ್ಬಂದಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ನಮ್ಮ ಧಿಕ್ಕಾರವಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot