ಸ್ಯಾಮ್ ಸಂಗ್ ಕಂಪೆನಿಯು ಮೊಬೈಲ್ ಡಿಸ್ ಪ್ಲೇ ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಚೀನಾದಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಭಾನುವಾರ, ಜೂನ್ 20, 2021

ಸ್ಯಾಮ್ ಸಂಗ್ ಕಂಪೆನಿಯು ಮೊಬೈಲ್ ಡಿಸ್ ಪ್ಲೇ ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಚೀನಾದಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಸ್ಯಾಮ್ ಸಂಗ್ ಕಂಪೆನಿಯು ಮೊಬೈಲ್ ಡಿಸ್ ಪ್ಲೇ ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಚೀನಾದಿಂದ ಉತ್ತರ ಪ್ರದೇಶಕ್ಕೆ  ಸ್ಥಳಾಂತರಿಸಲಾಗಿದೆ.



ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಯಾಮ್ ಸಂಗ್ ಕಂಪನಿಗೆ ಸಂಪೂರ್ಣವಾಗಿ ಮುಂದೆಯೂ ಸಹ ಉತ್ತಮ ಸಹಕಾರ ನೀಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ. 


ದೈತ್ಯ ಎಲೆಕ್ಟ್ರಾನಿಕ್ ಕಂಪನಿ ಸ್ಯಾಂಸಂಗ್ ತನ್ನ ಡಿಸ್ ಪ್ಲೇ ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಚೀನಾದಿಂದ ಉತ್ತರ ಪ್ರದೇಶದ ನೋಯಿಡಾಗೆ  ಸ್ಥಳಾಂತರಗೊಂಡಿತು. ಇದರ ಪತ್ರಿಕಾ ಪ್ರಕಟಣೆಯನ್ನು ರವಿವಾರ ಬಿಡುಗಡೆಗೊಳಿಸಿತು. 


 ಸ್ಯಾಮ್ ಸಂಗ್ ಕಂಪೆನಿಯು  ಉತ್ತರಪ್ರದೇಶವು ಬಂಡವಾಳ ಹೂಡಿಕೆದಾರರಿಗೆ  ಮತ್ತು ಕೈಗಾರಿಕೆಗೆ ಉತ್ತಮ ವಾತಾವರಣ ಹೊಂದಿದೆ ಎಂದು ತಿಳಿಸಿದೆ. ಸ್ಯಾಮ್ಸಂಗ್ ಕಂಪನಿಯ ಉನ್ನತಾಧಿಕಾರಿಗಳು ಉತ್ತರಪ್ರದೇಶವನ್ನು ಡಿಸ್ಪ್ಲೇ ತಯಾರಿಕಾ ಘಟಕಗಳಿಗೆ ಉತ್ತಮ ಸ್ಥಳವೆಂದು ಗುರುತಿಸಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬೆಳವಣಿಗೆಯು ಮೇಕ್ ಇನ್ ಇಂಡಿಯಾದ ಉತ್ತಮ ಬೆಳವಣಿಗೆ ಮತ್ತು ಉತ್ತರ ಪ್ರದೇಶದ ಅನೇಕ ಯುವಕರಿಗೆ ಕೆಲಸ ದೊರಕುವ ಸಾಧ್ಯತೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕರ್ಣನಂಥ ಸಂಕಷ್ಟ ಸಮಯದಲ್ಲೂ ಕೂಡ ಉತ್ತರಪ್ರದೇಶದಲ್ಲಿ ಅದೆಂಥ ಈ ಬೆಳವಣಿಗೆಯು ಯುವಕರಲ್ಲಿ ಹೊಸ ಆಶಾ ಭಾವನೆಯನ್ನು ತರಿಸಿದೆ. 

ಕಂಪೆನಿಯು ಆರಂಭವಾದರೆ ಅದರಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಅನೇಕ ಕೆಲಸಗಳು ಹುಟ್ಟುಹಾಕುತ್ತವೆ ಕಂಪೆನಿ ಸುತ್ತಮುತ್ತಲು ಹೋಟೆಲ್ ಹಾಗೂ ಬಾಡಿಗೆ ಮನೆಯವರಿಗೂ ಸಹ ಉದ್ಯೋಗ ದೊರಕುತ್ತದೆ ಅದನಂತರ ನೇರವಾಗಿಯೇ ಕಂಪೆನಿಯಲ್ಲಿ ಕೆಲಸ ಅನೇಕ ಜನರಿಗೆ ದೊರಕುವುದರಿಂದ ಕನಿಷ್ಠಪಕ್ಷ ಎಣಿಸಿದಂತೆ ಹತ್ತು ಸಾವಿರ ಜನರಿಗೆ ನೇರವಾಗಿ ಕೆಲಸ ಮತ್ತು ಇಪ್ಪತ್ತು ಸಾವಿರ ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರಕುವ ಆಶಾಭಾವನೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವ್ಯಕ್ತಪಡಿಸಿದ್ದಾರೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot