ನಿಜವಾದ ಅಲ್ಪಸಂಖ್ಯಾತರ ನಾಯಕ ಯಾರು?-ಇಲ್ಲಿದೆ ಉತ್ತರ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಸೋಮವಾರ, ಜೂನ್ 28, 2021

ನಿಜವಾದ ಅಲ್ಪಸಂಖ್ಯಾತರ ನಾಯಕ ಯಾರು?-ಇಲ್ಲಿದೆ ಉತ್ತರ



ಅಲ್ಪಸಂಖ್ಯಾತರ ಮತಗಳು ಎಂದಿಗೂ ಕಾಂಗ್ರೆಸ್ಸಿಗೆ ಮತ್ತು ಇತರ ಜಾತ್ಯತೀತ ಪಕ್ಷಗಳಿಗೆ ಆಗಿವೆ ಅದು ಎಂಬುದು ಇವತ್ತಿನವರೆಗೂ ಸಹ ಜಗಜ್ಜಾಹೀರಾದ ವಿಷಯ.  ಮುಸ್ಲಿಮ ಮತ್ತು ಕ್ರಿಶ್ಚಿಯನ್ನರ ಮತಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಯಾವತ್ತಿಗೂ ಮುಂದೆ ಇದೆ. ಇತರೆ ಅಲ್ಪಸಂಖ್ಯಾತರಾದ ಬುದ್ಧ ಧರ್ಮ, ಜೈನ ಧರ್ಮದವರು ಮತ್ತು ಸಿಖ್ ಮತಗಳು ಯಾವತ್ತಿಗೂ ಕಾಂಗ್ರೆಸಿನ ಪರ ಇರುವುದಿಲ್ಲ ಇವು ಬಿಜೆಪಿಯ ಪರ ಇವೆ.

ಅಲ್ಪಸಂಖ್ಯಾತ  ಮುಸ್ಲಿಮರ ಮತಗಳು ಮತ್ತು ಕ್ರಿಶ್ಚಿಯನ್ನರ ಮತಗಳು ಕಾಂಗ್ರೆಸ್ ಗೆ ಬರಲು ಹಲವಾರು ಕಾರಣಗಳಿವೆ ಅದರಲ್ಲಿ ಕಾಂಗ್ರೆಸಿನ ಕೆಲವು ಜಾತ್ಯತೀತತೆ ಮತ್ತು ಅತಿಯಾದ ಅಲ್ಪಸಂಖ್ಯಾತರ ಓಲೈಕೆಗೆ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ .

ಕಾಂಗ್ರೆಸ್ ಪಕ್ಷದಿಂದ ಯಾರೇ ನಿಂತರೂ ಸಹ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ಸಿಗೆ ಬರುತ್ತವೆ ಆದರೆ ಇತ್ತೀಚೆಗೆ ಕಾಂಗ್ರೆಸ್ಸಿನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹಲವಾರು ಚರ್ಚೆ ನಡೆಯುತ್ತಿದೆ ಅದರಲ್ಲಿ ಪ್ರಮುಖವಾಗಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ಎಲ್ಲರ ಅಭಿಪ್ರಾಯ ಆಗಿದೆ. ಈ ಅಭಿಪ್ರಾಯವು ಡಿಕೆಶಿ ಅವರನ್ನು ಕೆರಳಿಸಿರಬಹುದು.

ಡಿಕೆಶಿ ಮತ್ತು ಸಿದ್ಧರಾಮಯ್ಯರ ಹೋಲಿಕೆ ಮಾಡಿದಾಗ ಅಲ್ಪಸಂಖ್ಯಾತರ ಮತಗಳು ಬರಲು ಕಾರಣ ಸಿದ್ದರಾಮಯ್ಯನವರ ಅತಿಯಾದ ಜಾತ್ಯಾತೀತತೆ ಮತ್ತು ಸಿದ್ದರಾಮಯ್ಯನವರ ಸಮಾನತೆಯ ನಿಲುವಾಗಿದೆ. ಅಲ್ಪ ಸಂಖ್ಯಾತರ ಮತಗಳನ್ನು ಸೆಳೆಯಲು ಸಿದ್ದರಾಮಯ್ಯನವರು ಸದಾ ಮುಂದಿರುತ್ತಾರೆ.

ಡಿಕೆಶಿ ಅವರಿಗೆ ಹೋಲಿಸಿದಾಗ ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರಿಗೆ ಹೆಚ್ಚು ಆಪ್ತರು ಮತ್ತು ಇತರೆ ಹಿಂದುಳಿದ ಮತ್ತು ದಲಿತರಿಗೆ ಸಿದ್ದರಾಮಯ್ಯನವರ ಸಮಾನತೆ ನಿಲುವು ಸದಾ ಎಲ್ಲರನ್ನೂ ಆಕರ್ಷಿಸುತ್ತದೆ ಮತ್ತು ಸಿದ್ದರಾಮಯ್ಯನವರ  ಭ್ರಷ್ಟಾಚಾರ ರಹಿತ ವ್ಯಕ್ತಿತ್ವ ಎಲ್ಲರನ್ನು ಆಕರ್ಷಿಸುತ್ತದೆ.

ಡಿಕೆಶಿ ಇತ್ತೀಚೆಗೆ ಜೈಲಿಗೆ ಹೋಗಿ ಬಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಕಪ್ಪುಚುಕ್ಕೆ ಎಂಬಂತೆ ಭಾಸವಾಗುತ್ತದೆ ಮತ್ತು ಸಿದ್ದರಾಮಯ್ಯನರ ಭ್ರಷ್ಟಾಚಾರ ರಹಿತ ಸಮಾನತೆಯ ವ್ಯಕ್ತಿತ್ವ ಇಂದಿಗೂ ಎಂದೆಂದಿಗೂ ಜನಮಾನಸ ಅಚ್ಚಳಿಯದೆ ಉಳಿಯುತ್ತದೆ.

ಅಹಿಂದ - ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತರ ನಾಯಕ ಅಘೋಷಿತ ನಾಯಕ ಸಿದ್ಧರಾಮಯ್ಯ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot