ಧಾರವಾಡ ಜಕಣಿ ಬಾವಿ ಹತ್ಯಾಕಾಂಡ-ಇಂದಿಗೆ ನೂರು ವರ್ಷ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಗುರುವಾರ, ಜುಲೈ 1, 2021

ಧಾರವಾಡ ಜಕಣಿ ಬಾವಿ ಹತ್ಯಾಕಾಂಡ-ಇಂದಿಗೆ ನೂರು ವರ್ಷ






ಭಾರತದ ಸ್ವಾತಂತ್ರ್ಯ ಸಂಗ್ರಾಮವು ಹತ್ತೊಂಬತ್ತನೇ ಶತಮಾನದ ಮೂರನೆಯ ದಶಕದಲ್ಲಿ ತೀವ್ರ ಬರದ ತೀವ್ರತೆ ಅತಿಯಾಗಿತ್ತು. ಬ್ರಿಟಿಷರ ದೌರ್ಜನ್ಯ ಅತಿಯಾದಂತೆ ಭಾರತೀಯರ ಪ್ರತಿರೋಧವು ಅತಿಯಾಗಿತ್ತು. ಧಾರವಾಡ ಬ್ರಿಟಿಷರ ಹಲವಾರು ಕಚೇರಿಗಳ ಕೇಂದ್ರಸ್ಥಳ, ಇಲ್ಲಿಯೂ ಸಹ ಬ್ರಿಟಿಷರ ವಿರುದ್ಧ ಹೋರಾಟ ತೀವ್ರವಾಗಿತ್ತು.  ಧಾರವಾಡದಲ್ಲಿನ ಬ್ರಿಟಿಷರ ವಿರುದ್ಧದ ಹೋರಾಟ ಬ್ರಿಟಿಷರ ನಿದ್ದೆಗೆಡಿಸಿತ್ತು.

ಇಂತಹ ಸಮಯದಲ್ಲಿ ಧಾರವಾಡದಲ್ಲೊಂದು ಹತ್ಯಾಕಾಂಡವೇ ನಡೆದುಹೋಯಿತು. ಹತ್ಯಾಕಾಂಡ ನಡೆದ ಸ್ಥಳ ಧಾರವಾಡದ ಕೇಂದ್ರ ಭಾಗವಾದಂತಹ ಜಕಣಿಬಾವಿಯಾಗಿತ್ತು. ಇವತ್ತು ಜಕಣಿ ಬಾವಿಯನ್ನು ಸರಕಾರ ಮುಚ್ಚಿದೆ ಆದರೂ ಸಹ ಆ ಸ್ಥಳವನ್ನು ಇಂದಿಗೂ ಧಾರವಾಡಿಗರು ಜಕಣಿಬಾವಿ ಎಂದೇ ಕರೆಯುತ್ತಾರೆ. ಜಕಣಿಬಾವಿ ಯೂ ಧಾರವಾಡ ಮಾರುಕಟ್ಟೆ ಕೇಂದ್ರ ಸ್ಥಳದಲ್ಲಿದೆ ಅಲ್ಲಿ ಈಗಲೂ ಸಹ ಹುತಾತ್ಮರ ಸ್ಮಾರಕವು ರಸ್ತೆ ಮಧ್ಯೆ ನಿಂತಿದೆ . ಸ್ಮಾರಕವು ನಿರ್ಲಕ್ಷ್ಯಕ್ಕೊಳಗಾಗಿ ದ್ದಂತೂ ಇನ್ನೊಂದು ಸಂಗತಿ.
 
ಹತ್ಯಾಕಾಂಡ ನಡೆದು ನೂರು ವರ್ಷಗಳಾಗಿವೆ ೧೯೨೧ ಜುಲೈ ಒಂದರಂದು ಬ್ರಿಟಿಷರ ಗುಂಡಿಗೆ ೩ ಜೀವಗಳು ಬಲಿಯಾದವು. ಸ್ವಾತಂತ್ರ್ಯ ಚಳುವಳಿಯ ಪ್ರಮುಖ ನಾಯಕನಾಗಿದ್ದ  ಶಿವಲಿಂಗಯ್ಯ ಲಿಂಬಣ್ಣ ದೇವರಮಠ ಅವರ ಹೊಟ್ಟೆಗೆ ಗುಂಡು ತಗುಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 
ಗುಂಡು ತಗುಲಿ ಹುತಾತ್ಮರಾದವರು ನೆನಪಿಗೆ  ರಸ್ತೆ ಮಧ್ಯೆ ಸ್ಮಾರಕವಿದೆ,  ಈ ಸ್ಮಾರಕವನ್ನು ಇಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಜುಲೈ ಒಂದರಂದು  ಹುತಾತ್ಮರನ್ನು ನೆನೆಯುತ್ತಾರೆ ಧಾರವಾಡಿಗರು. 

ಈ ಹತ್ಯಾಕಾಂಡದ ರೂವಾರಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ  ಪೇಂಟರ ನ ವಿರುದ್ಧ ಲಾಲಾ ಲಜಪತ್ ರಾಯ್ ಅವರು ಧಾರವಾಡಕ್ಕೆ ಬಂದು ಹೋರಾಟವನ್ನು ಮಾಡಿದ್ದರು. ಇದನ್ನು ಜಲಿಯನ್ ವಾಲ್ ಬಾಗ್ ದುರಂತಕ್ಕೆ ಸಮವೆಂದು ಪತ್ರಿಕೆಗಳು ಟೀಕಿಸಿದವು .

ಈ ಹತ್ಯಾಕಾಂಡ ನಡೆದು ಸರಿಯಾಗಿ ನೂರು ವರ್ಷಗಳಾಗಿವೆ. ಅಂದಿನ ನಮ್ಮ ಹಿರಿಯರ ಪ್ರಾಣತ್ಯಾಗ, ಇಂದಿನ ನಮ್ಮ ಸ್ವಾತಂತ್ರ್ಯಕ್ಕೆ ಕಾರಣ. ಮುಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ವನ್ನು ಸದಾ ಸ್ಮರಿಸಲೇಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot