ಕಾಲೇಜು ಶುಲ್ಕ - ಇಷ್ಟೊಂದು ಸರಿನಾ? - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಮಂಗಳವಾರ, ಜುಲೈ 6, 2021

ಕಾಲೇಜು ಶುಲ್ಕ - ಇಷ್ಟೊಂದು ಸರಿನಾ?

ಪಿಯುಸಿ ಮುಗಿದು ನಮಗಿಷ್ಟವಾದ ಕೋರ್ಸು ಮತ್ತು ಕಾಲೇಜುನ್ನು ಸೇರಿದಾಗ ನಮ್ಮ ಆನಂದಕ್ಕೆ ಪಾರವೇ ಇರುವುದಿಲ್ಲ. ಮಕ್ಕಳ ಭವಿಷ್ಯ ಭದ್ರವಾಯಿತು, ವಿದ್ಯಾರ್ಥಿ ಆಗಿದ್ದರೆ ನನ್ನ ಭವಿಷ್ಯ ಭದ್ರವಾಯಿತು ಎಂದು ಸಂತೋಷ ಪಡುತ್ತೇವೆ.  ಹೊಸ ಕಾಲೇಜು ಮತ್ತು ಹೊಸ ಉತ್ಸಾಹದೊಂದಿಗೆ ಸೇರಿಕೊಳ್ಳಲು ಹೋಗುತ್ತೇವೆ. ಕಾಲೇಜಿಗೆ ಹೋದಾಗಲೆ ನಮಗೆ ಗೊತ್ತಾಗುವುದು CET ಶುಲ್ಕದೊಂದಿಗೆ ದೊಡ್ಡ ಮೊತ್ತದ ಕಾಲೇಜ್ ಶುಲ್ಕವನ್ನು ತುಂಬಬೇಕಾಗಿದೆ ಎಂಬುದು.


ಅದರಲ್ಲೂ ಸಹ ಪ್ರತಿವರ್ಷ Wifi  ಶುಲ್ಕ, ಕ್ರೀಡಾ ಶುಲ್ಕ ,ಕಟ್ಟಡ ಅಭಿವೃದ್ಧಿ ಶುಲ್ಕ,ಕಾಲೇಜು ಕ್ಲಬಗಳ ಶುಲ್ಕ, ಗ್ರಂಥಾಲಯ ಶುಲ್ಕ, ವಾರ್ಷಿಕೋತ್ಸವ ಮತ್ತು ಪಠ್ಯೇತರ ಚಟುವಟಿಕೆಗಳ ಶುಲ್ಕ,    ಅಪಘಾತ ವಿಮೆ ಶುಲ್ಕ, ಹಾಸ್ಟೆಲ್ ರೂಮಿನ ಶುಲ್ಕ ಮತ್ತು ಊಟದ ಶುಲ್ಕ, ಕಾಲೇಜು ಬಸ್ಸಿನ ಶುಲ್ಕ, ಹೀಗೆ ಹಲವಾರು ಶುಲ್ಕ ಗಳನ್ನೊಳಗೊಂಡ ಶಿಕ್ಷಣ ವ್ಯವಸ್ಥೆಯ ಶುಲ್ಕವೂ ನಮಗೆ ಗೊತ್ತಾಗುವುದು ಕಾಲೇಜಿನ ಶುಲ್ಕವನ್ನು ತುಂಬುವ ಸಮಯದಲ್ಲಿಯೇ. ಇದರ ಜೊತೆಗೆ ಲ್ಯಾಬ್ ಶುಲ್ಕ, ಲ್ಯಾಬಿನ ಕೆಮಿಕಲ್ ಮತ್ತು  ಬಳಕೆ ವಸ್ತುಗಳ ಶುಲ್ಕ,  ಟ್ಯೂಷನ್ ಫೀ, ಆಂತರಿಕ ಪರೀಕ್ಷಾ ಶುಲ್ಕ, ಸೆಮಿಸ್ಟರ್ ಎಕ್ಸಾಂನ ಶುಲ್ಕ, ವಿಶ್ವವಿದ್ಯಾಲಯ (ಯುನ್ವರ್ಸಿಟಿ) ಶುಲ್ಕ , ಸಮವಸ್ತ್ರಗಳ ಶುಲ್ಕ , ಪ್ರಯೋಗಾಲಯದಲ್ಲಿ ಧರಿಸುವ ಬಟ್ಟೆ ಶುಲ್ಕ, ಕಾಲೇಜು ನೋಂದಣಿ ಮತ್ತು ಅರ್ಜಿ ಶುಲ್ಕ, ಘಟಿಕೋತ್ಸವದ ಶುಲ್ಕ, ಹೀಗೆ ಇವುಗಳನ್ನು ಪಟ್ಟಿ ಮಾಡುತ್ತ ಹೋದರೆ ತುಂಬಾ ಸಮಯ ಬೇಕಾದೀತು. 


ಕೆಲವು ಕಾಲೇಜುಗಳು ಗ್ರಂಥಾಲಯ ಶುಲ್ಕವನ್ನು ಮೂರು  ಸಾವಿರದಿಂದ ಹತ್ತು ಸಾವಿರದವರೆಗೂ ತೆಗೆದುಕೊಳ್ಳುತ್ತವೆ. ಆದರೆ   ಒಬ್ಬ ವಿದ್ಯಾರ್ಥಿಗೆ 4 ಪುಸ್ತಕಗಳನ್ನು ಕೊಡುತ್ತವೆ ಮತ್ತು ಗ್ರಂಥಾಲಯವನ್ನು ಸಂಜೆ 5 ಗಂಟೆಗೆ ಬಂದ್ ಮಾಡುತ್ತವೆ. ಪ್ರತಿಷ್ಠಿತ ಕಾಲೇಜುಗಳು 24 ಗಂಟೆಯೂ ಸಹ  ಗ್ರಂಥಾಲಯ ವ್ಯವಸ್ಥೆಯನ್ನು ಕೊಡುತ್ತವೆ.  ವಿದ್ಯಾರ್ಥಿಗಳಿಗೆ ಕನಿಷ್ಠ ರಾತ್ರಿ 10ಯ ಗಂಟೆವರೆಗೂ ಗ್ರಂಥಾಲಯದ ಅವಶ್ಯಕತೆ ಇರುತ್ತದೆ.


ಇತ್ತೀಚಿಗೆ ಶುಲ್ಕವನ್ನು ವಿದ್ಯಾರ್ಥಿಗಳಿಂದ ಹೆಚ್ಚು ತೆಗೆದುಕೊಳ್ಳಲು ಇರುವ ಹೊಸ ಕಾರಣವೆಂದರೆ WIFI. ಈ wifi ಸಂಪರ್ಕವನ್ನು ಕೆಲವು ಕಾಲೇಜುಗಳು 2000 ದಿಂದ 10000 ತೆಗೆದುಕೊಳ್ಳುತ್ತವೆ, ಅಂದರೆ ತಿಂಗಳಿಗೆ 500ರಿಂದ 1000ದವರೆಗೆ ಹಣ ತೆಗೆದುಕೊಳ್ಳುತ್ತವೆ. ನಿಮಗೆ ಗೊತ್ತಿದೆ ಕಾಲ ಬದಲಾಗಿದೆ, ತಂತ್ರಜ್ಞಾನ ಅಭಿವೃದ್ಧಿಯಾಗಿದೆ, ಎಲ್ಲರ ಕೈಯಲ್ಲೂ 4G speed ಇರುವಂತಹ ಇಂಟರ್ನೆಟ್ ಕೇವಲ 100-200 ರೂಪಾಯಿಯಂತೆ ತಿಂಗಳಿಗೆ ದೊರೆಯುತ್ತದೆ ಆದರೂ ಸಹ ಅನವಶ್ಯಕವಾಗಿ ವರ್ಷಕ್ಕೆ ಸಾವಿರಾರುಗಟ್ಟಲೆ ಹಣ ತುಂಬುವುದು wifiಗಾಗಿ ವ್ಯರ್ಥವಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳಿಗಿರುವ ಕಾಲೇಜುಗಳಲ್ಲಿ ಎಲ್ಲರೂ wifi ಉಪಯೋಗಿಸಿದರೆ ಸಿಗುವ wifi speed ಸಹ ತುಂಬಾ ಕಡಿಮೆ. 


ಇನ್ನೂ ಕ್ರೀಡಾ ಶುಲ್ಕಕ್ಕೆ ಬಂದರೆ ಹೆಚ್ಚಿನ ಪದವಿ ಕಾಲೇಜುಗಳಲ್ಲಿ ಕ್ರೀಡಾ ವಿಭಾಗ ಎಂಬುದು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ವಿಭಾಗ.ಸುಂದರ ಮೈದಾನಗಳಿರುತ್ತವೆ ಆದರೆ ಕ್ರೀಡಾ ಸಾಮಗ್ರಿಗಳ ಪೂರೈಕೆ ಇರುವುದಿಲ್ಲ ಮತ್ತು ದೈಹಿಕ ಶಿಕ್ಷಕರಂತೂ ದಾಖಲಾತಿಗೆ ಮಾತ್ರ ಇರುತ್ತಾರೆ.


ದೊಡ್ಡ ದೊಡ್ಡ ಕಟ್ಟಡಗಳಿರುವ ವಿದ್ಯಾರ್ಥಿ ನಿಲಯ ಆದರೆ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಕಡಿಮೆ ಇರುತ್ತದೆ. ಒಂದು ರೂಮಿನಲ್ಲಿ ಐದಾರು ಜನ ಇರುವಂಥ ಪರಿಸ್ಥಿತಿ ಬರುತ್ತದೆ ಜೊತೆಗೆ ಊಟವೂ ಸಹ ಉತ್ತಮ ಗುಣಮಟ್ಟ ಮತ್ತು  ಸಾಕಾಗುವಷ್ಟು ನೀಡುವಲ್ಲಿ ವಿದ್ಯಾರ್ಥಿ ನಿಲಯಗಳು ವಿಫಲವಾಗಿವೆ.

ಕೆಲವು ಕಾಲೇಜುಗಳಲ್ಲಿ ದಾಖಲಾತಿ ಸಂದರ್ಭದಲ್ಲಿ ಆರಂಭಿಕ ಕಿಟ್ ಅನ್ನು ಖರೀದಿ ಮಾಡುವಂತೆ ಪ್ರೋತ್ಸಾಹಿಸುತ್ತವೆ ಇದರಲ್ಲಿ ಅವಶ್ಯಕ ಮತ್ತು ಅನವಶ್ಯಕ ವಸ್ತುಗಳನ್ನು ಸೇರಿಸಿ ದೊಡ್ಡ ಮೊತ್ತವನ್ನು  ತೆಗೆದುಕೊಳ್ಳುತ್ತವೆ. 

ಹಲವಾರು ರೀತಿಯ ಶುಲ್ಕಗಳ ಮಧ್ಯೆ, ನಾವು ಎಚ್ಚೆತ್ತುಕೊಂಡು ಸರಿಯಾದ ಶುಲ್ಕವನ್ನು ಸರಿಯಾದ ಕಾಲೇಜ್ ಗಳಲ್ಲಿ ಹೇಗೆ ತುಂಬಬೇಕು ಎಂಬುದರ ವಿಸ್ತೃತ ಚರ್ಚೆಯನ್ನು ನಮ್ಮ ವಿಚಾರ ಸಂಕಿರ್ಣದಲ್ಲಿ  ಮಾಡಬಹುದು. ನಾವು ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ವಿಚಾರ ಸಂಕಿರ್ಣ ವನ್ನು ಎರ್ಪಡಿಸುತ್ತೇವೆ.


ಹದಿನೈದು ದಿನಕ್ಕೊಮ್ಮೆ ವಿಶೇಷ ಮಾಹಿತಿಯನ್ನು ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಕಳುಹಿಸಲು ಸದಾ ಸಿದ್ಧರಾಗಿರುತ್ತೇವೆ, ವಿಚಾರಣ ಸಂಕಿರ್ಣದಲ್ಲಿ  ಭಾಗವಹಿಸುವ ಆಸಕ್ತರು ಈ ಕೆಳಗಿನ ವಾಟ್ಸ್ ಅಪ್ ಲಿಂಕ್ ಗೆ ಸೇರಿಬೇಕೊಳ್ಳಬಹುದು ಮತ್ತು ಕೆಳಗಿನ ಗೂಗಲ್ ಫಾರ್ಮನ್ನು ತುಂಬಬೇಕು.

ವಿಚಾರ ಸಂಕಿರ್ಣಕ್ಕೆ ನೊಂದಾಯಿಸಲು ಈ ಕೆಳಗಿನ ಗೂಗಲ್ ಲಿಂಕ ಬಳಸಿ

https://forms.gle/W9vqTXpkUsSFx62d9


ಹೆಚ್ಚಿನ ಮಾಹಿತಿ, ವಿಚಾರ ಸಂಕಿರ್ಣದ ದಿನಾಂಕ ಮತ್ತು ಸಮಯ ತಿಳಿಯಲು ವಾಟ್ಸಪಲ್ಲಿ ಸಂಪರ್ಕಿಸಿ, ಈ ಕೆಳಗಿನ ಲಂಕ್ ಬಳಸಿ

https://chat.whatsapp.com/BySTRz5gof93B4yX7FkXxv 

(ಮುಂದಿನ ವಿಚಾರ ಸಂಕಿರ್ಣದ ಮಾಹಿತಿಯನ್ನು ವಾಟ್ಸಪ ಹಂಚಿಕೊಳ್ಳತ್ತೇವೆ)

ಹೆಚ್ಚಿನ ಮಾಹಿತಿಗಾಗಿ

7619210594


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot